Revelation of John 4

4:0 ಯೆಹೆ. 1:
ಸ್ವರ್ಗೀಯ ಆರಾಧನೆ

1ಆನಂತರ ನಾನು ನೋಡಿದಾಗ, ಪರಲೋಕದಲ್ಲಿ ತೆರೆದಿರುವ ಒಂದು ಬಾಗಿಲು ಕಾಣಿಸಿತು. ಮೊದಲು ನನ್ನೊಡನೆ ಮಾತನಾಡಿದ ವಾಣಿಯು
4:1 ಪ್ರಕ. 1:10; ವಿಮೋ. 19:19, 20:
ತುತ್ತೂರಿಯಂತೆ ಮಾತನಾಡುತ್ತದೋ ಎಂಬಂತೆ ನನಗೆ ಕೇಳಿಸಿತು. ಅದು,
4:1 ಪ್ರಕ. 11:12:
<<ಇಲ್ಲಿಗೆ ಏರಿ ಬಾ,
4:1 ಪ್ರಕ. 1:1, 19; 22:6:
ಮುಂದೆ ಸಂಭವಿಸಬೇಕಾದವುಗಳನ್ನು ನಿನಗೆ ತೋರಿಸಿ ಕೊಡುವೆನು>> ಎಂದು ಹೇಳಿತು.
2ಕೂಡಲೆ ನಾನು
4:2 ಪ್ರಕ. 1:10:
ದೇವರಾತ್ಮವಶನಾದೆನು, ಆಗ ಇಗೋ ಪರಲೋಕದಲ್ಲಿ
4:2 ಕೀರ್ತ. 11:14, 103, 19; ಯೆಶಾ. 66:1; ಮತ್ತಾ 5:34; 23:22:
ಒಂದು ಸಿಂಹಾಸನವಿತ್ತು. ಸಿಂಹಾಸನದ ಮೇಲೆ ಒಬ್ಬನು ಕುಳಿತಿದ್ದನು.
3ಕುಳಿತಿದ್ದವನು ಕಣ್ಣಿಗೆ
4:3 ಅಥವಾ, ವಜ್ರ. ಪ್ರಕ. 21:11:
ಸೂರ್ಯಕಾಂತಿ ಪದ್ಮರಾಗ ಮಣಿಗಳಂತೆ ಕಾಣುತ್ತಿದ್ದನು. ಸಿಂಹಾಸನದ ಸುತ್ತಲೂ ಪಚ್ಚೆಯಂತೆ ತೋರುತ್ತಿದ್ದ
4:3 ಯೆಹೆ. 1:27, 28; ಪ್ರಕ. 10:1; ಆದಿ. 9:13-17.
ಕಾಮನಬಿಲ್ಲು ಇತ್ತು.

4ಇದಲ್ಲದೆ ಸಿಂಹಾಸನದ ಸುತ್ತಲೂ
4:4 ಪ್ರಕ. 11:16:
ಇಪ್ಪತ್ನಾಲ್ಕು ಸಿಂಹಾಸನಗಳಿದ್ದವು. ಆ ಸಿಂಹಾಸನಗಳ ಮೇಲೆ
4:4 ಪ್ರಕ. 3:4:
ಶುಭ್ರವಸ್ತ್ರ ಧರಿಸಿಕೊಂಡಿದ್ದ
4:4 1 ಪೂರ್ವ. 24:1-18; ಪ್ರಕ. 5:8:
ಇಪ್ಪತ್ನಾಲ್ಕು ಮಂದಿ ಹಿರಿಯರು ಕುಳಿತಿದ್ದರು.
4:4 ವ. 10; ಯಾಕೋಬ. 1:12:
ಅವರ ತಲೆಗಳ ಮೇಲೆ ಚಿನ್ನದ ಕಿರೀಟಗಳಿದ್ದವು.
5ಸಿಂಹಾಸನದಿಂದ
4:5 ಪ್ರಕ. 8:5,11,19; 16:18. ವಿಮೋ. 19:16:
ಮಿಂಚು, ಗುಡುಗು, ಗರ್ಜನೆಗಳು ಹೊರ ಹೊಮ್ಮುತ್ತಿದ್ದವು. ಆ ಸಿಂಹಾಸನ ಮುಂದೆ
4:5 ಪ್ರಕ. 1:4:
ದೇವರ ಏಳು ಆತ್ಮಗಳನ್ನು ಸೂಚಿಸುವ
4:5 ಜೆಕ. 4:2:
ಏಳು ದೀಪಗಳು ಉರಿಯುತ್ತಿದ್ದವು.

6ಇದಲ್ಲದೆ ಸಿಂಹಾಸನದ ಮುಂದೆ ಸ್ಫಟಿಕಕ್ಕೆ ಸಮಾನವಾದ
4:6 ಪ್ರಕ. 15:2; 1 ಅರಸು. 7:23, 39:
ಗಾಜಿನ ಸಮುದ್ರವಿದ್ದ ಹಾಗೆ ಕಾಣಿಸಿತು. ಸಿಂಹಾಸನದ ಮಧ್ಯದಲ್ಲಿ ಅದರ ನಾಲ್ಕು ಕಡೆಗಳಲ್ಲಿ
4:6 ಯೆಹೆ. 1:5-14,18; 10:12:
ನಾಲ್ಕು ಜೀವಿಗಳಿದ್ದವು. ಅವುಗಳಿಗೆ ಹಿಂದೆಯೂ ಮುಂದೆಯೂ ತುಂಬಾ ಕಣ್ಣುಗಳಿದ್ದವು.

7ಮೊದಲನೆಯ ಜೀವಿಯು ಸಿಂಹದಂತಿತ್ತು, ಎರಡನೆಯ ಜೀವಿಯು ಹೋರಿಯಂತಿತ್ತು, ಮೂರನೆಯ ಜೀವಿಯ ಮುಖವು ಮನುಷ್ಯನ ಮುಖದಂತಿತ್ತು, ನಾಲ್ಕನೆಯ ಜೀವಿಯು ಹಾರುವ ಹದ್ದಿನಂತಿತ್ತು. 8ಆ ನಾಲ್ಕು ಜೀವಿಗಳಿಗೆ
4:8 ಯೆಶಾ. 6:2:
ಒಂದೊಂದಕ್ಕೆ ಆರಾರು ರೆಕ್ಕೆಗಳಿದ್ದವು.
4:8 ವ. 6:
ಸುತ್ತಲೂ ಒಳಗೂ ತುಂಬಾ ಕಣ್ಣುಗಳಿದ್ದವು. ಆ ಜೀವಿಗಳು ಹಗಲಿರುಳು ವಿಶ್ರಮಿಸಿಕೊಳ್ಳದೆ,

4:8 ಯೆಶಾ. 6:3:
<<ದೇವರಾದ ಕರ್ತನು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು, ಆತನು ಸರ್ವಶಕ್ತನು,
4:8 ಪ್ರಕ. 1:4:
ಇರುವಾತನು, ಇದ್ದಾತನು, ಬರುವಾತನು>> ಎಂದು ಹೇಳುತ್ತಿದ್ದವು.

9ಯುಗಯುಗಾಂತರಗಳಲ್ಲಿಯೂ ಜೀವಿಸುವವನಾಗಿ ಸಿಂಹಾಸನದ ಮೇಲೆ ಕುಳಿತಿರುವಾತನಿಗೆ ಆ ಜೀವಿಗಳು ಮಹಿಮೆ ಗೌರವ ಕೃತಜ್ಞತಾಸ್ತುತಿಗಳನ್ನು ಸಲ್ಲಿಸುತ್ತಿರುವಾಗ, 10
This verse is empty because in this translation its contents have been moved to form part of verse Rev 4:11.
In this translation, this verse contains text which in some other translations appears in verses Rev 4:10-Rev 4:11.
ಆ ಇಪ್ಪತ್ನಾಲ್ಕು ಮಂದಿ ಹಿರಿಯರು ಸಿಂಹಾಸನದ ಮೇಲೆ ಕುಳಿತಾತನ ಪಾದಕ್ಕೆ
4:10 ಪ್ರಕ. 5:8, 14; 7:11; 11:16; 19:4:
ಅಡ್ಡಬಿದ್ದು, ತಮ್ಮ ಕಿರೀಟಗಳನ್ನು ಸಿಂಹಾಸನದ ಮುಂದೆ ಹಾಕಿ, <<ಕರ್ತನೇ ನಮ್ಮ ದೇವರೇ
4:11 ಪ್ರಕ. 5:12:
ನೀನು ಮಹಿಮೆಯನ್ನು, ಗೌರವವನ್ನು, ಬಲವನ್ನು ಹೊಂದುವುದಕ್ಕೆ ಯೋಗ್ಯನಾಗಿದ್ದೀ,
4:11 ಪ್ರಕ. 10:6; 14:7; ಆದಿ. 1:1; ಅ. ಕೃ. 14:15; ಎಫೆ. 3:9:
ಏಕೆಂದರೆ ಸಮಸ್ತವನ್ನು ಸೃಷ್ಟಿಸಿದಾತನು ನೀನೇ.
4:11 ಕೀರ್ತ. 33:9-11:
ಎಲ್ಲವೂ ನಿನ್ನ ಚಿತ್ತದಿಂದಲೇ ಇದ್ದವು ಮತ್ತು ನಿನ್ನ ಚಿತ್ತದಿಂದಲೇ ನಿರ್ಮಿತವಾದವು>> ಎಂದು ಹೇಳುತ್ತಾ ಯುಗಯುಗಾಂತರಗಳಲ್ಲಿಯೂ ಜೀವಿಸುವಾತನನ್ನು ಆರಾಧಿಸುತ್ತಿದ್ದರು.

11

Copyright information for KanULB